Jump to content

User:Mayur.H Kotian

From Wikipedia, the free encyclopedia

ಪರಿಚಯ:

ನನ್ನ ಹೆಸರು ಮಯೂರ್ ಎಚ್. ನಾನು ಜನಿಸಿದ್ದು ೨೬ ಎಪ್ರಿಲ್ ೧೯೯೯ ಮಂಗಳೂರುನಲ್ಲಿ. ನನ್ನ ತಂದೆ ಹರೀಶ್ ಕುಮಾರ್, ತಾಯಿ ದಯವಂತಿ. ನನ್ನ ತಂದೆಯವರು ಸರಕಾರಿ ಕೆಲಸದಲ್ಲಿ ಸೇವೆಯನ್ನು ಮತ್ತು ತಾಯಿ ಖಾಸಗಿ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕೆನರಾ ಸ್ಕೂಲ್, ಉರ್ವ, ಮಂಗಳೂರು, ಮತ್ತು ಪಿಯೂಸಿ ಪದವಿಯನ್ನು ಕೆನರಾ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನು. ಮುಂದಿನ ಉನ್ನತ ವಿಧ್ಯಾಭ್ಯಾಸವನ್ನು ಪ್ರಥಮ ಬಿಬಿಎ ಪದವಿಯನ್ನು ಆಯ್ಕೆ ಮಾಡಿ ನಂತೂರಿನ ಪದುವಾ ಕಾಲೇಜಿನಲ್ಲಿ ಫ್ರಾರಂಬಿಸಿದ್ದೇನೆ.

ಅನುಭವ: ನನ್ನ ಬಾಳಿನಲ್ಲಿ ನೆನಪೆಂಬುದು ಬಹಳ ಸುಂದರ. ಸಿಹಿ ನೆನಪುಗಳನ್ನು ಮೆಲುಕು ಹಾಕುವುದೆಂದರೆ, ನನಗೆ ತುಂಬಾ ಇಷ್ಟ. "ಅನುಭವ ಸವಿಯಲ್ಲ... ಅನುಭವದ ನೆನಪೇ ಸವಿ" ಸಾಧರಣವಾಗಿ ಪ್ರತಿಯೊಬ್ಬನಿಗೂ ತನ್ನ ಬಾಳಿನ ಸಿಹಿ ನೆನಪು ಕೇಳಿದರೆ ಉತ್ತರ ಅವರ ಬಾಲ್ಯವೇ ಆಗಿರುತ್ತದೆ. ತಾನು ಕಲಿತ ಶಾಲೆ, ಜೊತೆಯಾಗಿ ಇದ್ದ ಗೆಳೆಯ, ಗೆಳೆತಿಯರು, ಬುದ್ದಿ ಹೇಳಿ ತಿದ್ದಿದ ಅಧ್ಯಾಪಕರು, ಇವರೆಲ್ಲಾ ನೆನಪಿಗೆ ಬರುತ್ತದೆ. ಅದರಲ್ಲೂ ನನ್ನ ಅಪ್ಪ, ಅಮ್ಮ ನನ್ನನ್ನು ಶಾಲೆಗೆ ಸೇರಿಸಲು ಬಂದಾಗ ನಾನಿನ್ನೂ ಮೂರು ವರ್ಷದ ಮಗು. ಆ ಮೂರು ವರ್ಷದ ಹೆಜ್ಜೆ ಇದೀಗ ಹದಿನೇಂಟು ವಸಂತಗಳನ್ನು ದಾಟಿ ಈ ಪದವಿ ಕಾಲೇಜಿನ ಮೆಟ್ಟಿಲು ಹತ್ತಿದ್ದೇನೆ ಎಂದು ಎಣಿಸುವಾಗ ಮನಸ್ಸು ಖುಷಿ ಆಗುತ್ತದೆ.

ನನ್ನ ಹವ್ಯಾಸ: ಉತ್ತಮವಾದ ಅಭ್ಯಾಸಗಳನ್ನೇ ಹವ್ಯಾಸಗಳು ಎನ್ನಬಹುದು. ಹವ್ಯಾಸ ಮನುಷ್ಯನ ಎಲ್ಲ ಅಭಿವ್ರದ್ಧಿಗೆ ಪೂರಕವಾಗಿದೆ. ಸಮಯದ ಸದುಪಯೋಗವೂ ಅದರಿಂದ ಸಾಧ್ಯ. ನಮ್ಮ ಮನಸ್ಸು ಎಂದೂ ಶೂನ್ಯವಾಗಿ ಇರಲಾರದು. ಒಂದಲ್ಲ ಒಂದು ವಿಚಾರ ಅದರಲ್ಲಿ ಬಂದೇ ಬರುತ್ತದೆ. ಅದು ಮನಸ್ಸಿನ ಸ್ವಭಾವ. ಉತ್ತಮ ವಿಚಾರಗಳನ್ನು ತುಂಬಿಕೊಂಡು ಪ್ರಗತಿಸಾಧಿಸುವುದು ನಮ್ಮ ಕೈಯಲ್ಲಿಯೇ ಇದೆ. ಉತ್ತಮ ವಿಚಾರಗಳನ್ನು ಮನಸ್ಸಲ್ಲಿ ತುಂಬಿಕೊಳ್ಳದಿದ್ದರೆ, ಕೆಟ್ಟ ವಿಚಾರಗಳು ತುಂಬಿಕೊಳ್ಳಬಹುದು. ಯಾವುದೇ ಉತ್ತಮ ಅಭ್ಯಾಸ ಬಾಲ್ಯದಲ್ಲಿಯೇ ಸುಲಭ ಸಾಧ್ಯ. ನಾನು ಅಂಚೆ ಚೀಟಿಗಳ ಸಂಗ್ರಹ, ನಾಣ್ಯಗಳ ಸಂಗ್ರಹ, ಪ್ರಾಣಿ, ಪಕ್ಷಿ, ಮಹಾತ್ಮರು, ರಾಷ್ಟ್ರ ನಾಯಕರು ಸಂಗ್ರಹ, ಸಂಗೀತ, ನ್ರತ್ಯಗಳ ಅಭ್ಯಾ ಸ, ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದು.